p { text-align:justify; }
Authentic Indian Museum
Welcome to SJM Museum
Promotion of Cultural Heritage
Evidence from Antiquity

ಶ್ರೀ ಮುರುಘರಾಜೇಂದ್ರ ವಸ್ತು ಸಂಗ್ರಹಾಲಯದ ಒಂದು ವೈಶಿಷ್ಟತೆ

ಚಿತ್ರದುರ್ಗದ ನಾಡನ್ನು 11ಜನ ಪಾಳೆಯಗಾರರು ಸುಮಾರು 211 ವರ್ಷಗಳ ವರೆಗೆ ಆಳ್ವಿಕೆ ಮಾಡಿರುವುದನ್ನು ಇತಿಹಾಸವು ಸ್ಪಷ್ಟವಾಗಿ ತಿಳಿಸುತ್ತದೆ. ಇವರಲ್ಲಿ ಶೂರನು, ದೀನದಲಿತರಿಗೆ ಆಶ್ರಯದಾತನೂ ಆದ ಬಿಚ್ಚುಗತ್ತಿ ಭರಮಣ್ಣನಾಯಕ ತನ್ನ ಗುರುಗಳಾದ ಶ್ರೀ ಮುರುಘರಾಜೇಂದ್ರ (ಶಾಂತವೀರ ಸ್ವಾಮಿಗಳು) ಯತಿವರ್ಯರಿಗೆ ಚಿತ್ರದುರ್ಗದಲ್ಲಿ ಭವ್ಯವಾದ ಒಂದು ಕಲ್ಲು ಮಠವನ್ನು ಹದಿನೆಂಟನೆಯ ಶತಮಾನದ ಮೊದಲ ದಶಕದಲ್ಲಿ ಕಟ್ಟಿಸಿಕೊಟ್ಟನೆಂದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ. ಈ ಮಠದಲ್ಲಿ ಸುಮಾರು ವರ್ಷಗಳಿಂದ ಸತತವಾಗಿ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸುತ್ತಾ ಬರಲಾಗಿದೆ. ದೇಶ-ವಿದೇಶಗಳಲ್ಲಿ ಸಂಚರಿಸಿ ಸಂಗ್ರಹಿಸಿ ತಂದಿರುವ ಪ್ರಾಚ್ಯವಸ್ತುಗಳು ಅಪಾರ ಸಂಖ್ಯೆಯಲ್ಲಿದ್ದು, ಇವುಗಳ ಸೂಕ್ತ ರಕ್ಷಣೆ ಮತ್ತು ನಶಿಸಿ ಹೋದ ಸಂಸ್ಕøತಿಯನ್ನು ಪುನಃ ತೋರ್ಪಡಿಸಲು ಒಂದು ವಸ್ತು ಸಂಗ್ರಹಾಲಯದ ಸ್ಥಾಪನೆ ಅಗತ್ಯವಾಗಿ ಆಗಬೇಕೆಂದು ನಿರ್ಧರಿಸಲಾಯಿತು.

ಇಲ್ಲಿ ಅಸಂಖ್ಯಾತ ಪ್ರಾಚ್ಯವಸ್ತುಗಳು ಇರುವುದರಿಂದ ವೀಕ್ಷಣೆಗೆ ಅನುಕೂಲವಾಗುವ ಹಾಗೆ ವಿಭಾಗಗಳನ್ನಾಗಿ ಮಾಡಲಾಗಿದೆ. ಬೆಳ್ಳಿಯ ಲೋಹದ ಪಲ್ಲಕ್ಕಿ, ಅಂಬಾರಿ, ಸಿಂಹಾಸನ, ದಂಡಿಗೆಗಳು, ಬಹಳ ಪ್ರಮುಖವಾಗಿವೆ. ತಾಮ್ರಲೋಹದ ಶಿಲ್ಪಗಳಲ್ಲಿ ಶಿವಪಾರ್ವತಿ ಮತ್ತು ನಂದಿ, ಹಸು-ಕರು ವಿಶಿಷ್ಟ ರೀತಿಯ ಪೀಠಗಳು ಈಗಲೂ ತಮ್ಮ ಆಕರ್ಷಣೆಗಳನ್ನು ಕಾಯ್ದುಕೊಂಡು ಬರುತ್ತವೆ. ಇನ್ನು ಪಂಚಲೋಹ ವಸ್ತುಗಳಲ್ಲಿ ಶಿವಪಾರ್ವತಿಯೊಂದಿಗೆ ಗಣೇಶನು ಕುಳಿತಿರುವ ಶಿಲ್ಪ, ದುರ್ಗಾದೇವಿ, ಸರಸ್ಪತಿ, ಲಕ್ಷ್ಮೀ, ವಿಷ್ಣು, ಲಕ್ಷ್ಮೀನರಸಿಂಹ, ಓಡುತ್ತಿರುವ ಭಂಗಿಯಲ್ಲಿರುವ ಕುದುರೆಗಳು, ಚಲಿಸುವ ಭಂಗಿಯಲ್ಲಿರುವ ಆನೆಗಳು, ವಿವಿಧ ಗಾತ್ರದ ಪೆಟ್ಟಿಗೆಗಳು, ಧ್ಯಾನಸ್ಥ ಬುದ್ಧನು, ಹೂಜಿಗಳು, ವೀರಾಂಜನೇಯ ಮುಂತಾದ ಶಿಲ್ಪಗಳು ಪ್ರಾಚೀನತೆಗೆ ಹೆಸರಾಗಿವೆ.

ಕಲ್ಲಿನ ಶಿಲ್ಪಗಳಲ್ಲಿ ಗಣಪತಿ, ವೀರಗಲ್ಲು ಮಾಸ್ತಿಗಲ್ಲು, ನಂದಿ, ಸಪ್ತಮಾತ್ರಿಕೆಯರು, ವಿಷ್ಣು, ದುರ್ಗಾ ಕಾಳಿಕಾ ಮುಂತಾದವುಗಳು, ಕ್ರಿ.ಶ. 1-2 ಮತ್ತು 15-16ನೇ ಶತಮಾನದ ನಾಣ್ಯಗಳಲ್ಲಿ ಶಾತವಾಹನರ, ವಿಜಯನಗರ ಮತ್ತು ಮುಸ್ಲಿಂ ಆಳ್ವಿಕೆಯ ನಾಣ್ಯಗಳು ಪ್ರಮುಖವಾಗಿವೆ. ಕ್ರಿ.ಶ 17-18ನೇ ಶತಮಾನದ ತಾಳೆಯಗರಿ, ಹಸ್ತಪ್ರತಿಗಳು ಮತ್ತು ಇತರೆ ಕಾಗದ ಕಡತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವಸ್ತು ಸಂಗ್ರಹಾಲಯಗಳು, ಕಲೆ ಮತ್ತು ಸಂಸ್ಕøತಿಯನ್ನು ರಕ್ಷಿಸುವ ದೊಡ್ಡ ಉಗ್ರಾಣಗಳೆಂದು ಹೇಳಬಹುದು. ಈಗ ಇವು ವಿದ್ಯಾರ್ಜನೆಯ ಸ್ಥಳವಾಗಿ, ಜ್ಞಾನದ ಭಂಡಾರಗಳಾಗಿ, ಸಂಶೋಧನೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಜಗತ್ತಿನಾದ್ಯಂತ ಸಂಗ್ರಹಿಸಲಾದ ಅಪೂರ್ವ ವಸ್ತುಗಳಲ್ಲದೆ ಶ್ರೀಮಠದ ನಾಲ್ಕುಜನ ಪೀಠಾಧೀಶರಿಗೆ ಸಲ್ಲಿಸಿದ ಬಿನ್ನವತ್ತಳೆ, ಪಲ್ಲಕ್ಕಿ, ಮೇನೆ, ಪೂಜಾಸಾಮಗ್ರಿಗಳು, ಬಳಸಿದ ಕುರ್ಚಿಗಳು, ಮಂಚಗಳು, ಭಾವಚಿತ್ರಗಳು, ಶಾಸನ, ದೇಶೀಯ ಮತ್ತು ವಿದೇಶಿ ಕರೆನ್ಸಿಗಳು, ಹಸ್ತಪ್ರತಿಗಳು, ಬಗೆಬಗೆಯ ವಸ್ತುಗಳು, ಅಂಚೆಚೀಟಿಗಳು, ಆಯುಧಗಳು... ಅವನ್ನು ನೋಡುವುದೇ ಒಂದು ಖುಷಿ. ಇಡೀ ದೇಶವೆ ಅಭಿಮಾನಪಡುವ ಪ್ರಾಚ್ಯ ವಸ್ತುಸಂಗ್ರಹಾಲಯ ಇದಾಗಿದ್ದು, ವೈವಿಧ್ಯತೆಗಳಿಂದ ಕೂಡಿದೆ.

-----ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

ವಸ್ತುಸಂಗ್ರಹಾಲಯಗಳು ಸಮಾಜ ಮತ್ತು ಜಗತ್ತಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ಪರಿವರ್ತಿಸುವ ಮತ್ತು ಪೋಷಿಸುವ ಶಕ್ತಿಯನ್ನು ಹೊಂದಿವೆ.
ಪ್ರಮುಖ ಸಾಂಸ್ಕೃತಿಕ ವಿನಿಮಯ, ಸಂಸ್ಕೃತಿಗಳ ಪುಷ್ಟೀಕರಣ ಮತ್ತು ಜನರಲ್ಲಿ ಪರಸ್ಪರ ತಿಳುವಳಿಕೆ, ಸಹಕಾರ ಮತ್ತು ಶಾಂತಿಯ ಅಭಿವೃದ್ಧಿಯ ಸಾಧನವಾಗಿ ವಸ್ತುಸಂಗ್ರಹಾಲಯಗಳ ಮೌಲ್ಯದ ಬಗ್ಗೆ ವಸ್ತುಸಂಗ್ರಹಾಲಯ ಸಮುದಾಯಕ್ಕೆ ಒಂದು ಅನನ್ಯ ಕ್ಷಣವನ್ನು ಸೂಚಿಸುತ್ತದೆ.
icom.museum ಪ್ರಕಾರ, ವಸ್ತುಸಂಗ್ರಹಾಲಯಗಳು ನಮ್ಮ ಸುತ್ತಲಿನ ಪ್ರಪಂಚವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿವೆ. ವಸ್ತುಸಂಗ್ರಹಾಲಯಗಳು ನಮ್ಮ ಭೂತಕಾಲದ ಬಗ್ಗೆ ನಮಗೆ ಪರಿಚಿತವಾಗಿಸುತ್ತದೆ ಮತ್ತು ಉತ್ತಮ ಭವಿಷ್ಯವನ್ನು ಕಂಡುಹಿಡಿಯಲು ಮತ್ತು ನಿರ್ಮಿಸಲು ನಮ್ಮ ಮನಸ್ಸನ್ನು ತೆರೆಯುವ ಮಾರ್ಗವನ್ನು ತೋರಿಸುತ್ತವೆ. ರಷ್ಯಾದ ಮಾಸ್ಕೋದಲ್ಲಿ ನಡೆದ ICOM ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ನಿರ್ಣಯದ ಅಂಗೀಕಾರದೊಂದಿಗೆ 1977 ರಲ್ಲಿ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು (May-18)ಸ್ಥಾಪಿಸಲಾಯಿತು ವಸ್ತುಸಂಗ್ರಹಾಲಯಗಳ ಸೃಜನಶೀಲ ಆಕಾಂಕ್ಷೆಗಳು ಮತ್ತು ಪ್ರಯತ್ನಗಳನ್ನು ಮತ್ತಷ್ಟು ಏಕೀಕರಿಸಲು ಮತ್ತು ಅವರ ಚಟುವಟಿಕೆಯತ್ತ ವಿಶ್ವ ಸಾರ್ವಜನಿಕರ ಗಮನವನ್ನು ಸಮುದಾಯದಲ್ಲಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ವಸ್ತುಸಂಗ್ರಹಾಲಯಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹತ್ವ ಪೂರ್ಣವಾಗಿವೆ

Museums play a crucial role in preserving local culture. With careful documentation and artifact preservation, a culture can be recorded and remembered regardless of its future. It can also be shared and understood by those from different cultural backgrounds.

The purpose of this museum website, the promotion of cultural heritage of a tourist destination and their significance in attracting new visitors. It has been assumed that the websites content has influence on the intended behavior of persons who visit them, on their wish to revisit the museum websites and to recommend them to their friends, as well as on the probability of the physical visit to the museum. In order to fulfill the purpose of this paper, the method of content analysis and the survey method have been used. By applying the content analysis method the museum websites presenting the cultural heritage of the region Istria have been analyzed. By the survey method it has been established that the museum websites with richer content influence positively the intention of revisiting the website, the individual visit to the museum and the recommending of the museum website to friends and family. The contribution of this paper is seen in proving the importance of implementing web marketing in the museum practice in order to present the cultural heritage of a tourist destination and in order to attract visitors.

read more

What are the benefits of visiting museums?

Spark curiosity, Get access to a trusted source of knowledge, Develop civic awareness and a sense of place, Help to learn historical lessons not taught in schools, Encourage questions, Build listening skills, Provoke imagination.

read more